skip to main
|
skip to sidebar
ಮನದಾಳದ ಮಾತುಗಳು
Showing posts with label
ಚುಟುಕು
.
Show all posts
Showing posts with label
ಚುಟುಕು
.
Show all posts
Sunday, June 20, 2010
ಸ್ವಾಗತ.
ಸ್ವಾಗತ.
ಪೂರ್ಣಚಂದಿರನು ತನ್ನ ಮನೆಗೆ ಹೋಗಲು
ನಿನಗಾಗಿ ಕಾಯುತಿಹನು..
ಮುಂಜಾವಿನ ಇಬ್ಬನಿಯು
ನಿನ್ನ ಸ್ಪರ್ಶಕ್ಕೆ ಕಾಯುತಿಹುದು..
ಹಕ್ಕಿಗಳು ಚಿಲಿಪಿಲಿಯೆನ್ನುತ್ತ
ಇಂಚರವ ಹಾಡುತಿಹುದು..
ಬಾ ಭಾನುತೇಜನೇ
ನಿನಗಿದೋ ಸ್ವಾಗತ....
Thursday, March 4, 2010
ಬಂದುಬಿಡು
ಹುಣ್ಣಿಮೆ ಚಂದಿರನ ಬೆಳದಿಂಗಳಲಿ
ನನ್ನ ಹೃದಯದ ಬಾಗಿಲು ತೆರೆದು
ನಿನಗಾಗಿ ಕಾದಿಹೆನು..
ಬೆಳದಿಂಗಳಂತೆ ಬಂದುಬಿಡು
ನನ್ನ ಹೃದಯದೊಳಗಿನ ನಿನ್ನ ಮನೆಗೆ....
Thursday, December 17, 2009
ಚುಟುಕು..
ಪ್ರೀತಿಯ ಕಡಲು...
ಸಮುದ್ರದಲ್ಲಿ ದೊರೆಯುವ
ಮುತ್ತಿನಂತೆ
ಗಣಿಯಲ್ಲಿ ದೊರೆಯುವ
ಚಿನ್ನದಂತೆ
ಭೂಮಿಯಲ್ಲಿ ದೊರೆಯುವ
ವಜ್ರದಂತೆ
ಆಕಾಶದಲ್ಲಿ ಹೊಳೆಯುವ
ನಕ್ಶತ್ರದಂತೆ
ಮರುಭೂಮಿಯಲ್ಲಿ ಕಾಣುವ
ಒಯಾಸಿಸ್ ನಂತೆ
ಪ್ರೀತಿಯ ಕಡಲಲ್ಲಿ ದೊರೆತೆ
ನೀ ನಿಧಿಯಂತೆ....
Monday, December 7, 2009
ಚುಟುಕು....
ಹವಾಮಾನ.
ಅತ್ತ
ಅತ್ತೆಯ ಬಾಯಲ್ಲಿ
ಗುಡುಗು ಮಿಂಚುಗಳು ಆರ್ಭಟಿಸಿದಾಗ.
ಇತ್ತ
ಸೊಸೆಯ ಕಣ್ಣಿನಲ್ಲಿ
ದಾರಾಕಾರ ಜಡಿ ಮಳೆ..
Monday, November 30, 2009
ಚುಟುಕುಗಳು..
ಪ್ರಿಯೆ
ಈ ಮನಸ್ಸೆಂಬ ಸರೋವರಕ್ಕೆ
ಪ್ರೀತಿಯೆಂಬ ಮಧುರ ಕಲ್ಲನ್ನೆಸೆದು
ತರಂಗಳ ಅಲೆ ಸೃಷ್ಟಿಸಿ
ಎಲ್ಲಿರುವೆ ಪ್ರಿಯೆ?
ಈ ತರಂಗದ ಅಲೆಗಳ ರಭಸ
ತಾಳಲಾರದೆ ನೊಂದು ಬೆಂದಿರುವೆ
ನೀ ಬೇಗ ಬರಲಾರೆಯಾ ಪ್ರಿಯೆ?
Tuesday, November 24, 2009
ಚುಟುಕುಗಳು..
ಆಸೆ..
ನನ್ನ ಒಂದು ಆಸೆಯ
ಹೇಳಲು ಹೊರಟಾಗ ಆಗುವದು
ಮಾತಿನ ಕಡಿತ..
ಆಮೇಲೆ ಪರಿತಪಿಸುವದು
ನನ್ನ ಹ್ರದಯದ ಬಡಿತ....
Monday, November 23, 2009
ಚುಟುಕುಗಳು..
ದೇವದಾಸ....
ನಿನ್ನ ಅಂದ ವರ್ಣಿಸಲು
ನಾನಾದೆ ಕಾಳಿದಾಸ..
ನೀ ನನ್ನ ಬಿಟ್ಟು ಮರೆಯಾದಾಗ
ನಾನಾದೆ ದೇವದಾಸ.........
ಕಾರಣ....
ಹೋಗುವದಾದರೆ ಹೋಗು
ದಾರಿ ದೊಡ್ಡದಿದೆ..
ಹೋಗುವ ಮೊದಲು ಹೇಳು
ನೀ ಹೋಗುವ ಕಾರಣ....
Home
Subscribe to:
Posts (Atom)
Blog Archive
▼
2010
(3)
▼
June
(1)
ಸ್ವಾಗತ.
►
March
(1)
►
January
(1)
►
2009
(5)
►
December
(2)
►
November
(3)
ನನ್ನ ಬಗ್ಗೆ.....
ಸುಬ್ರಹ್ಮಣ್ಯ ಹೆಗಡೆ
ನನ್ನ ಬಗ್ಗೆ ಹೇಳಿಕೊಳ್ಳುವಂತದ್ದೇನು ಇಲ್ಲ. ಮನಸ್ಸಿಗೆ ಬಂದಿದ್ದನ್ನು ಇಲ್ಲಿ ಗೀಚುವ ಬಯಕೆ.....
View my complete profile
Followers