Sunday, June 20, 2010

ಸ್ವಾಗತ.

              


           ಸ್ವಾಗತ.


  
   

      ಪೂರ್ಣಚಂದಿರನು ತನ್ನ ಮನೆಗೆ ಹೋಗಲು
      ನಿನಗಾಗಿ ಕಾಯುತಿಹನು..
      ಮುಂಜಾವಿನ ಇಬ್ಬನಿಯು
      ನಿನ್ನ ಸ್ಪರ್ಶಕ್ಕೆ ಕಾಯುತಿಹುದು..
      ಹಕ್ಕಿಗಳು ಚಿಲಿಪಿಲಿಯೆನ್ನುತ್ತ

      ಇಂಚರವ ಹಾಡುತಿಹುದು..
      ಬಾ ಭಾನುತೇಜನೇ
      ನಿನಗಿದೋ ಸ್ವಾಗತ....

Thursday, March 4, 2010

ಬಂದುಬಿಡು

                                   
                                 ಹುಣ್ಣಿಮೆ ಚಂದಿರನ ಬೆಳದಿಂಗಳಲಿ
                                 ನನ್ನ ಹೃದಯದ ಬಾಗಿಲು ತೆರೆದು
                                 ನಿನಗಾಗಿ ಕಾದಿಹೆನು..
                                 ಬೆಳದಿಂಗಳಂತೆ ಬಂದುಬಿಡು
                                 ನನ್ನ ಹೃದಯದೊಳಗಿನ ನಿನ್ನ ಮನೆಗೆ....Friday, January 15, 2010

ಮಧುರ ನೆನಪು..

ಮಧುರ ನೆನಪು..ನಿನ್ನ ಜೊತೆ ಕಳೆದ ಮಧುರ
ನೆನೆಪುಗಳೇ ಸಾಕು ನನಗೆ..
ನೀ ಬಿತ್ತಿದ ಸಾವಿರಾರು ಸ್ವಪ್ನಗಳ
ಆನಂದ ಸಾಗರ
ಜೀವ ಭಾವಗಳು ರಂಗೇರಿ
ಮೈ ಮನಗಳಲ್ಲಿ ಝೇಂಕಾರ....

ನಿನ್ನ ಜೊತೆ ಕಳೆದ ಮಧುರ
ನೆನೆಪುಗಳೇ ಸಾಕು ನನಗೆ..
ಮುಸ್ಸಂಜೆಯಲಿ ಮುದ ತಂದ
ಪ್ರೇಮ ಸೌರಭ
ಹೊಂಗನಸಿನ ಓಕುಳಿಯಲಿ
ರಂಗು ರಂಗಾಯಿತು ನೀಲ ಗಗನ....

ನಿನ್ನ ಜೊತೆ ಕಳೆದ ಮಧುರ
ನೆನೆಪುಗಳೇ ಸಾಕು ನನಗೆ..
ಅದನ್ನೇ ನೆನೆದು ಬದುಕುವೆ
ಸಾವಿರ ವರುಷ
ಹೃದಯದ ಹಾಡಿಗೆ ಶೃತಿಯಾಗುವೆ
ಪ್ರತಿ ನಿಮಿಷ....